ಘೋಷಣೆ ಆಯ್ತು ಯಶ್‍ ಹೊಸ ಚಿತ್ರ; ಹೆಸರು ‘ಟಾಕ್ಸಿಕ್’

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಯಶ್‍ ಅಭಿನಯದ 19ನೇ ಚಿತ್ರದ ಘೋಷಣೆ ಕೊನೆಗೂ ಆಗಿದೆ. ಈ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಗೀತು ಮೋಹನ್‍ ದಾಸ್‍ ನಿರ್ದೇಶಿಸುತ್ತಿರುವುದು ಅಧಿಕೃತವಾಗಿದೆ. ಚಿತ್ರಕ್ಕೆ ‘ಟಾಕ್ಸಿಕ್‍’ ಎಂಬ ಹೆಸರಿಡಲಾಗಿದ್ದು, ಈ ಘೋಷಣೆಯನ್ನು ಸ್ವತಃ ಯಶ್‍ ಮಾಡಿದ್ದಾರೆ.

ಯಶ್‍ ಅಭಿನಯದ ‘ಕೆಜಿಎಫ್‍ 2’ ಚಿತ್ರ ಬಿಡುಗಡೆ ಆಗಿ ಒಂದೂವರೆ ವರ್ಷಗಳಾಗಿವೆ. ಆ ನಂತರ ಯಶ್‍ ಅಭಿನಯದ ಹೊಸ ಚಿತ್ರ ಯಾವುದೂ ಘೋಷಣೆಯಾಗಿಲ್ಲ. ಈ ಮಧ್ಯೆ, ಅವರು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಈ ವಿಷಯ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ.

ಹೀಗಿರುವಾಗಲೇ, ಭಾನುವಾರ ಸಂಜೆ ಇನ್‍ಸ್ಟಾಗ್ರಾಂನಲ್ಲಿ ಯಶ್‍, ಲೋಡಿಂಗ್ ಎಂಬ ಬರಹದ ಫೋಟೋ ಹಾಕಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಇಂದು ಬೆಳಿಗ್ಗೆ 09:55ಕ್ಕೆ ಹೆಸರು ಘೋಷಣೆಯಾಗಲಿದೆ ಎಂದು ಕೆವಿಎನ್‍ ಪ್ರೊಡಕ್ಷನ್ಸ್ ಹೇಳಿಕೊಂಡಿತ್ತು. ಅದರಂತೆ ಶೀರ್ಷಿಕೆ ಘೋಷಿಸುವ ವೀಡಿಯೋ ಯೂಟ್ಯೂಬ್‍ನಲ್ಲಿ ಬಿಡುಗಡೆ ಆಗಿದೆ.

ಅಂದಹಾಗೆ, ಈ ಚಿತ್ರವು 2025ರ ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

ಈ ಕಥೆ ನನಗಾಗಿ ಕಾಯುತ್ತಿತ್ತೇನೋ: ಜಯತೀರ್ಥ

Discover more from KannadaScreens

Subscribe now to keep reading and get access to the full archive.

Continue reading