ಕರ್ನಾಟಕದಲ್ಲಿ ಹೊಸ ದಾಖಲೆ ಬರೆಯುವುದಕ್ಕೆ ಹೊರಟಿದೆ ‘ಜೈಲರ್ 2’

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಜನಿಕಾಂತ್‍ ಅಭಿನಯದ ‘ಜೈಲರ್‍ 2’ ಚಿತ್ರವು ಕರ್ನಾಟಕದಲ್ಲಿ ಹೊಸ ದಾಖಲೆ ಬರೆಯುವುದಕ್ಕೆ ಸಜ್ಜಾಗಿದೆ. ಚಿತ್ರವು ನಾಳೆ ಗುರುವಾರ (ಅಕ್ಟೋಬರ್ 15) ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, 1300ಕ್ಕೂ ಹೆಚ್ಚು ಪ್ರದರ್ಶನಗಳು ಗುರುವಾರ ನಡೆಯಲಿದೆ.

ವಿಶೇಷವೆಂದರೆ, ಚಿತ್ರವು ಬೆಂಗಳೂರಿನಲ್ಲೇ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಪೈಕಿ, ಮಾಲ್‍ ಆಫ್‍ ಏಷ್ಯಾದಲ್ಲಿ ದಾಖಲೆಯ 38 ಪ್ರದರ್ಶನಗಳು ನಡೆಯಲಿವೆ. ಮೊದಲ ಪ್ರದರ್ಶನ ಬೆಳಿಗ್ಗೆ 6.30ಕ್ಕೆ ಶುರುವಾಗಲಿದ್ದು, ಕೊನೆಯ ಪ್ರದರ್ಶನ ರಾತ್ರಿ 10.15ಕ್ಕೆ ಪ್ರದರ್ಶನ ಶುರುವಾಗಲಿದೆ. ಮಧ್ಯೆ, 36 ಪ್ರದರ್ಶನಗಳು ನಡೆಯಲಿವೆ. ಕೋರಮಂಗಲದ ನೆಕ್ಸಸ್‍ ಮಾಲ್‍ನಲ್ಲಿ 24 ಪ್ರದರ್ಶನಗಳು, ನೆಕ್ಸಸ್ ಶಾಂತಿನಿಕೇತನ್ನಲ್ಲಿ 26, ಸೂಪರ್‍ಫ್ಲೆಕ್ಸ್ ಫೋರಂ ಮಾಲ್‍ನಲ್ಲಿ 31, ಒರಾಯನ್‍ ಮಾಲ್‍ನಲ್ಲಿ 26, ವೆಗಾಸಿಟಿಯಲ್ಲಿ 31, ಎಂ5 ಇಸಿಟಿಯಲ್ಲಿ 28 ಪ್ರದರ್ಶನಗಳು ನಡೆಯಲಿವೆ. ಒಟ್ಟಾರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲೇ 1000 ಪ್ರದರ್ಶನಗಳು ನಡೆಯುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಪರಭಾಷೆಯ ಜನಪ್ರಿಯ ನಟರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆದರೆ, ಕರ್ನಾಟಕದಲ್ಲಿ ಟಿಕೆಟ್‍ ದರ ಗಗನಕ್ಕೇರುವುದು ಸಹಜ. ಅದರಲ್ಲೂ ಮಲ್ಟಿಪ್ಲೆಕ್ಸ್ ದರಗಳು ಎರಡೂವರೆ ಸಾವಿರ ರೂಪಾಯಿವರೆಗೂ ಹೋಗುವುದಿದೆ. ಆದರೆ, ‘ಜೈಲರ್‍ 2’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ದರ ಸಹಜವಾಗಿಯೇ ಏರಿದೆ. ಅದರ ಜೊತೆಗೆ ಏಕಪರದೆಯ ಚಿತ್ರಮಂದಿರಗಳಲ್ಲೂ ಟಿಕೆಟ್‍ ಬೆಲೆಯನ್ನು ಸಾವಿರ ರೂಪಾಯಿಗೆ ಏರಿಸಲಾಗಿದೆ. ಬಹುತೇಕ ಸಿಂಗಲ್‍ ಸ್ಕ್ರೀನ್‍ಗಳಲ್ಲಿನ ಬೆಳಗಿನ ಪ್ರದರ್ಶನಗಳ ಟಿಕೆಟ್‍ ಬೆಲೆ 800 ರೂ, 1000 ರೂ ನಿಗದಿಯಾಗಿದೆ. ನಂತರ ಪ್ರದರ್ಶನಗಳು ಬೆಲೆ ಮಾಮೂಲಿನಂತೆಯೇ ಇದೆ.

2023ರಲ್ಲಿ ಬಿಡುಗಡೆಯಾದ ‘ಜೈಲರ್‍’ ಚಿತ್ರವು ಕರ್ನಾಟಕದಲ್ಲಿ ಸುಮಾರು ಕೋಟಿ ರೂ. ಗಳಿಕೆ ಮಾಡಿದೆ. ಆ ಚಿತ್ರದ ಮೊದಲ ದಿನದ ಗಳಿಕೆಯೇ 11 ಕೋಟಿ ರೂ. ಆಗಿತ್ತು ಎಂದು ಹೇಳಲಾಗಿತ್ತು. ‘ಜೈಲರ್‍ 2’ ಆ ಗಳಿಕೆಯನ್ನು ಮುರಿಯುತ್ತದಾ ಎಂಬ ಕುತೂಹಲ ಎಲ್ಲರಿಗೂ ಇದೆ. ‘ಜೈಲರ್ 2’ ಚಿತ್ರದ ಕರ್ನಾಟಕದ ವಿತರಣೆಯ ಹಕ್ಕುಗಳನ್ನು ಕೆ. ಮಂಜು ಮತ್ತು ಸ್ನೇಹಿತರು ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಅವರು ಬೆಂಗಳೂರು ಕುಮಾರ್‍ ಫಿಲಮ್ಸ್ ಮೂಲಕ ವಿತರಿಸುತ್ತಿದ್ದಾರೆ.

‘ಜೈಲರ್‍ 2’ ಚಿತ್ರದಲ್ಲಿ ರಜನಿಕಾಂತ್‍, ರಮ್ಯಾ ಕೃಷ್ಣನ್‍, ಎಸ್‍.ಜೆ. ಸೂರ್ಯ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಅತಿಥಿ ಪಾತ್ರಗಳಲ್ಲಿ ಮಿಥುನ್‍ ಚಕ್ರವರ್ತಿ, ಮೋಹನ್‍ ಲಾಲ್‍, ಶಿವರಾಜಕುಮಾರ್‍, ವಿದ್ಯಾ ಬಾಲನನ್‍, ಹೃತಿಕ್‍ ರೋಶನ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶನ ಮಾಡಿದ್ದು, ಸನ್‍ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್‍ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಚಿತ್ರಕ್ಕಿದೆ.

ವಿವಿಧತೆಯಲ್ಲಿ ಏಕತೆ ಸಾರುವ ‘ಸಂಭ್ರಮದ ರುಚಿ ಒಂದೇ …’ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading