‘ರಿಚರ್ಡ್ ಆ್ಯಂಟೋನಿ’ಗೆ ಮುಂದಿನ ಜನ್ಮದವರೆಗೂ ಕಾಯಬೇಕಾ, ಹೇಗೆ?

ಚಂದನವನ, ಸಿನಿ ಸುದ್ದಿ

ರಕ್ಷಿತ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಘೋಷಣೆಯಾಗಿ ಐದು ವರ್ಷಗಳಾಗಿವೆ. ಆದರೆ, ಸಿನಿಮಾ ಇದುವರೆಗೂ ಪ್ರಾರಂಭವಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇಷ್ಟರಲ್ಲಿ ಶುರುವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಇದುವರೆಗೂ ಚಿತ್ರದ ಸುದ್ದಿಯೇ ಇಲ್ಲ.

ಇಷ್ಟಕ್ಕೂ ಚಿತ್ರ ಬಿಡುಗಡೆಯಾಗೋದು ಯಾವಾಗ? ಇಂಥದ್ದೊಂದು ಪ್ರಶ್ನೆ ಮತ್ತೊಮ್ಮೆ ಕೇಳಿಬರುತ್ತಿದೆ. ಅದಕ್ಕೆ ಕಾರಣ, ಇತ್ತೀಚೆಗೆ ‘ಉಳಿದವರು ಕಂಡಂತೆ’ ಬಿಡುಗಡೆಯಾಗಿ 12 ವರ್ಷಗಳಾಗಿವೆ. ಅದನ್ನು ನೆನಪಿಸಿಕೊಳ್ಳುತ್ತಾ ರಕ್ಷಿತ್‍ ಶೆಟ್ಟಿ ಸೋಷಿಯಲ್‍ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ‘ಉಳಿದವರು ಕಂಡಂತೆ’ ಮುಂದುವರೆದ ಭಾಗವಾದ ‘ರಿಚರ್ಡ್ ಆ್ಯಂಟೋನಿ’ ಬಿಡುಗಡೆ ಯಾವಾಗ ಎಂದು ಹಲವರು ಪ್ರಶ್ನಿಸಿದ್ದಾರೆ.

‘ರಿಚರ್ಡ್ ಆ್ಯಂಟೋನಿ’ ಚಿತ್ರವು ಇದೇ ಶತಮಾನದಲ್ಲಿ ಬರುತ್ತದಾ ಅಥವಾ ಮುಂದಿನ ಜನ್ಮದವರೆಗೂ ಕಾಯಬೇಕಾ? ಎಂದು ಪ್ರಶ್ನಿಸಿದರೆ, ಚಿತ್ರ ಅನೌನ್ಸ್ ಮಾಡೋಕೆ ಇಷ್ಟು ವರ್ಷ ಅಂದರೆ, ಇನ್ನು ಶೂಟಿಂಗ್‍ ಮಾಡೋಕೆ ಎಷ್ಟು ಸಮಯ ತಗೋತೀಯಾ ಬ್ರೋ ಎಂದಿದ್ದಾರೆ. ಒಬ್ಬರಂತೂ, ‘ಲೋ ಅಣ್ಣ ಇದನ್ನು ಬಿಟ್ಟು ಹೊರಗೆ ಬಾರಪ್ಪ, ಪ್ರಪಂಚ ಮುಂದೆ ಮುಂದೆ ಹೋಗುತ್ತಿದೆ’ ಎಂದರೆ, ‘ಈ ತರಹದ ಪೋಸ್ಟ್ಗಳನ್ನು ನೋಡಿ ಸಾಕಾಗಿದೆ. ಇದನ್ನು ಬಿಟ್ಟು ಬೇರೆ ಏನಾದರೂ ಹೊಸದನ್ನು ಶುರು ಮಾಡಿ’ ಎಂದಿದ್ದಾರೆ. ‘ಅದೇ ಕಾಲದಲ್ಲಿ ಕಳೆದು ಹೋಗಿ ನಿಮ್ಮ ಪ್ರತಿಭೆ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಒಬ್ಬರೆಂದರೆ, ‘ಇನ್ನು ಎಷ್ಟು ಸಮಯ ಚಿತ್ರಕಥೆ ಬರೆಯುವುದರಲ್ಲೇ ಕಳೆಯುತ್ತೀರಾ? ನಿಮ್ಮ ನಂತರ ಬಂದವರೆಲ್ಲಾ ಪ್ಯಾನ್‍ ಇಂಡಿಯಾ ಸ್ಟಾರ್‍ಗಳಾಗಿದ್ದಾರೆ, ನೀವು ಮಾತ್ರ ದಶಕಗಳಿಂದ ಕೂತು ಬರೆಯುತ್ತಲೇ ಇದ್ದೀರಾ’ ಎಂದ ಇನ್ನೊಬ್ಬರು ಹೇಳಿದ್ದಾರೆ.

ಇದೆಲ್ಲದರ ಜೊತೆಗೆ ‘ಉಳಿದವರು ಕಂಡಂತೆ’ ಚಿತ್ರದ ಬಗ್ಗೆ ಹಲವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಅದೊಂದು ಕಲ್ಟ್ ಕ್ಲಾಸಿಕ್‍ ಆಗಿದ್ದು, ಬರವಣಿಗೆ ಮತ್ತು ಸಂಕಲನದ ವಿಷಯದಲ್ಲಿ ಆ ಚಿತ್ರವನ್ನು ಮೀರಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

‘ರಿಚರ್ಡ್ ಆ್ಯಂಟೋನಿ’ ಚಿತ್ರವನ್ನು ಮೊದಲು ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಿಸಬೇಕಿತ್ತು. ಆದರೆ, ಅವರು ನಿರ್ಮಾಣದಿಂದ ಹಿಂದೆ ಸರಿದಿದ್ದು, ರಕ್ಷಿತ್‍ ಶೆಟ್ಟಿ ಅವರೇ ಆ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇದೆ.

ಏ. 30ರಂದು ‘ಪೆದ್ದಿ’ ಬರೋದು ಸಂಶಯ; ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ

Latest Posts

Discover more from KannadaScreens

Subscribe now to keep reading and get access to the full archive.

Continue reading