ಬಾಮೈದ ರಾಣಗಾಗಿ ‘ಜೋಗಿ’ ಪ್ರೇಮ್ ಹೊಸ ಚಿತ್ರ ನಿರ್ಮಾಣ

ಚಂದನವನ, ಸಿನಿ ಸುದ್ದಿ

ಈ ಹಿಂದೆ, ‘ಏಕ್‍ ಲವ್‍ ಯಾ’ ಚಿತ್ರದ ಮೂಲಕ ರಕ್ಷಿತಾ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸಿದ್ದರು ನಿರ್ದೇಶಕ ‘ಜೋಗಿ’ ಪ್ರೇಮ್‍. ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಏಳುಮಲೆ’ ಚಿತ್ರದಲ್ಲಿ ರಾಣಾ ಹೀರೋ ಆಗಿದ್ದರು.

ಇದೀಗ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ರಾಮನವಮಿ ಹಬ್ಬದ ಪ್ರಯುಕ್ತ ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದರ ಹೆಸರು ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ (Phoenix Prems Studios). ಈ ನಿರ್ಮಾಣ ಸಂಸ್ಥೆಯಿಂದ ಮೊದಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆಯಂತೆ. ಈ ಸಂಸ್ಥೆಯ ಮೊದಲ ಚಿತ್ರವನ್ನು ಪ್ರೇಮ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮಂಜುನಾಥ್ ಬಿ.ಎಸ್ ನಿರ್ದೇಶಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.

ಮೊದಲೇ ಹೇಳಿದಂತೆ, ಈ ಚಿತ್ರಕ್ಕೆ ರಾಣಾ ಈ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಲಿಯಂ ಡೆವಿಡ್ ಅವರ ಛಾಯಾಗ್ರಹಣ, ರೋಮಿಯೋ ಅವರ ಸಂಗೀತ ಈ ಚಿತ್ರಕ್ಕಿರಲಿದೆ.

ರಾಮನವಮಿ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ ಈ ಹೊಸ ಸಾಹಸದ ಬಗ್ಗೆ ಪ್ರೇಮ್ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ತಾಂತ್ರಿಕ ವರ್ಗದ ವಿವರಗಳನ್ನು ರಕ್ಷಿತಾ ಪ್ರೇಮ್‍ ಹುಟ್ಟುಹಬ್ಬದ ಪ್ರಯುಕ್ಷ ಮಂಗಳವಾರ (ಮಾರ್ಚ್‍ 31) ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ.

ಕಾಲಭೈರವನಾದ ಸುದೀಪ್‍; ‘ಕೆಡಿ – ದಿ ಡೆವಿಲ್‍’ ಚಿತ್ರದ ಪೋಸ್ಟರ್ ಬಿಡುಗಡೆ

Latest Posts

Discover more from KannadaScreens

Subscribe now to keep reading and get access to the full archive.

Continue reading