ಕಂಡೂ ಕಾಣದಂತಿರುವ ಗಲ್ಲಿಗಲ್ಲಿಯ ಕಥೆ ‘ಲವ್ ಸೀಸನ್ಸ್’

ಚಂದನವನ, ಸಿನಿ ಸುದ್ದಿ

‘ಪ್ರೇಮಕಥೆಗಳಿಗೆ ಸಾವಿಲ್ಲ …’ ಎಂಬ ಮಾತಿನಂತೆ ಪ್ರೇಮದ ಕುರಿತು ಸಾವಿರಾರು ಕಥೆಗಳು ಸಿನಿಮಾಗಳಾಗಿವೆ. ಈಗ ಕೃತ್ವಿಕ್‍ ಎನ್ನುವವರು ಪ್ರೇಮದ ಕುರಿತಾದ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮುಗಿಸಿ, ಬಿಡುಗಡೆಗೆ ಅಣಿ ಮಾಡುತ್ತಿದ್ದಾರೆ.

ಎಲ್ಲರ ಬದುಕಿಗೆ ಹತ್ತಿರಾದ ಕಥಾನಕವನ್ನು ನವಿರಾಗಿ ಚಿತ್ರಿಸಿರುವ ಚಿತ್ರ ‘ಲವ್ ಸೀಸನ್ಸ್. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್‍ ಹಂತದಲ್ಲಿದೆ. ರಂಗಭೂಮಿ ಮತ್ತು ಸಿನಿಮಾ ಜಗತ್ತಿನಲ್ಲಿ ಕಳೆದ 10 ವರ್ಷದಿಂದೀಚೆಗೆ ಕಾರ್ಯ ನಿರ್ವಹಿಸುತ್ತಿರುವವರು ಕೃತ್ವಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಈ ಚಿತ್ರದಲ್ಲಿ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಗಲ್ಲಿ ಗಲ್ಲಿಯ ಕಥೆಯನ್ನು ಅವರು ಹೇಳುವುದಕ್ಕೆ ಹೊರಟಿದ್ದಾರಂತೆ.

ಮಂಡ್ಯ ರಮೇಶ್ ಸಾರಥ್ಯದ ನಟನಾ ಸಂಸ್ಥೆಯಲ್ಲಿ ಪಳಗಿಕೊಂಡಿರುವ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಒಂದೊಳ್ಳೆಯ ಕಥೆಯ ಜೊತೆಗೆ, ಈಗಿನ ಕಾಲಕ್ಕೆ ಅಗತ್ಯವಾಗಿರುವ ಸಂದೇಶ ಹೊಂದಿರುವ ಚಿತ್ರವನ್ನು ಕೃತ್ವಿಕ್‍ ರೂಪಿಸಿದ್ದಾರೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗುತ್ತಿದೆ.

‘ಲವ್‍ ಸೀಸನ್ಸ್’ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನವಿರುವ ಈ ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ನಟಿಸಿದ್ದಾರೆ.

 

ಚಿತ್ರ ತಡವಾಗಿಲ್ಲ; ಅಂದುಕೊಂಡಂತೆ ‘ಕೆಡಿ – ದಿ ಡೆವಿಲ್‍’ ಮುಗಿಸಿದ್ದೇವೆ: ಪ್ರೇಮ್

Latest Posts

Discover more from KannadaScreens

Subscribe now to keep reading and get access to the full archive.

Continue reading