ತಮ್ಮೂರಿನ ಮಜವಾದ ಕಥೆ ಹೇಳಲು ಹೊರಟ ಚಯನ್ ಶೆಟ್ಟಿ

ಚಂದನವನ, ಸಿನಿ ಸುದ್ದಿ

ಈ ಹಿಂದೆ ರೂಪೇಶ್‍ ಶೆಟ್ಟಿ ಅಭಿನಯದ ‘ಅಧಿಪತ್ರ’ ಎಂಬ ಆ್ಯಕ್ಷನ್‍ ಥ್ರಿಲ್ಲರ್‍ ಚಿತ್ರ ನಿರ್ದೇಶಿಸಿದ್ದ ಚಯನ್‍ ಶೆಟ್ಟಿ, ಇದೀಗ ತಮ್ಮ ಪಥ ಬದಲಿಸಿದ್ದಾರೆ. ಈ ಬಾರಿ ಅವರು ಕಾಮಿಡಿ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಮನರಂಜನಾತ್ಮಕ ಚಿತ್ರಕ್ಕೆ ಅವರು ಇಟ್ಟಿರುವ ಹೆಸರು ‘ಮ್ಯಾರೇಜ್‍ ಪಾರ್ಟಿ’.

‘ಮ್ಯಾರೇಜ್‍ ಪಾರ್ಟಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪ್ರಾರಂಭವಾಗಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಇದೊಂದು ಹಾಸ್ಯಪ್ರಧಾನ ಚಿತ್ರವಾಗಿದ್ದು, ಗಟ್ಟಿ ಕಥೆಯೊಂದಿಗೆ ಪ್ರತೀ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ಚಯನ್ ಮುಂದಾಗಿದ್ದಾರೆ.

ಒಂದೂರಿನಲ್ಲಿ ನಡೆಯುವ ಕಥೆ ಹೊಂದಿದುವ ‘ಮ್ಯಾರೇಜ್ ಪಾರ್ಟಿ’ ಚಿತ್ರೀಕರಣ ಕುಂದಾಪುರದ ಸುತ್ತಮುತ್ತ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಮೂಲತಃ ಕುಂದಾಪುರದವರೇ ಆಗಿರುವ ನಿರ್ದೇಶಕ ಚಯನ್ ಶೆಟ್ಟಿ ತಮ್ಮೂರಿನಲ್ಲಿ ನಡೆಯುವ ಮಜವಾದ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ.

ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ ನಟಿಸಿರುವ ವಿನೀತ್‍ ಕುಮಾರ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕ ಹೊಸಬನಾದರೂ, ಅವರ ಬೆನ್ನಿಗೆ ಜನಪ್ರಿಯ ಪೋಷಕ ಕಲಾವಿದರು ನಿಂತಿದ್ದಾರೆ. ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ಮೈಮ್ ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್ ಮುಂತಾದ ತುಳು ರಂಗಭೂಮಿ ಮತ್ತು ಸಿನಿಮಾದ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ, ‘ಮ್ಯಾರೇಜ್‍ ಪಾರ್ಟಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ಅವರ ಪಾಲಿಗಿದು ನಿರ್ಮಾಪಕರಾಗಿ ಮೊದಲ ಹೆಜ್ಜೆ. ಇನ್ನುಳಿದಂತೆ, ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.

ಅಂದಹಾಗೆ, ‘ಮ್ಯಾರೇಜ್‍ ಪಾರ್ಟಿ’ ಬರೀ ಕನ್ನಡವಷ್ಟೇ ಅಲ್ಲ, ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿದೆ.

ಅದಿತಿ ಬಾಲನ್ ಈಗ ಏಜೆಂಟ್‍ ಕಾವೇರಿ; ಆಪರೇಷನ್ ಥಿಯೇಟರ್‍ಗೆ ಎಂಟ್ರಿ

Latest Posts

Discover more from KannadaScreens

Subscribe now to keep reading and get access to the full archive.

Continue reading