ಸುಮಾರು ಆರು ತಿಂಗಳ ಹಿಂದೆ ‘ಕರಿಕಾಡ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಬಿಡುಗಡೆ ಹತ್ತಿರ ಬರುತ್ತಿದ್ದಂತೆಯೇ, ಒಂದೊಂದೇ ಹಾಡು ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ‘ರತುನಿ’ ಎಂಬ ಐಟಂ ಸಾಂಗ್ ಬಿಡುಗಡೆ ಆಗಿದೆ.
ಇತ್ತೀಚೆಗೆ, ಮಾಲ್ ಆಫ್ ಏಷ್ಯಾದಲ್ಲಿ ‘ರತುನಿ ರತುನಿ …’ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ಬಾಲಿವುಡ್ ಮಾದಕ ಬೆಡಗಿ ಕೃತಿ ವರ್ಮಾ ಹೆಜ್ಜೆ ಹಾಕಿದ್ದಾರೆ. ವೇದಿಕೆ ಮೇಲಿದ್ದವರೆಲ್ಲಾ ಹಾಡಿಗೆ ಹೆಜ್ಜೆ ಹಾಕಿ, ಸಂಭ್ರಮಿಸಿದರು.

‘ಕರಿಕಾಡ’ ಚಿತ್ರದಲ್ಲಿ ಕಾಡ ನಟರಾಜ್ ನಾಯಕ ನಟನಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಬಲ ರಾಜವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್, ಕರಿಸುಬ್ಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ದಿ. ರಾಕೇಶ್ ಪೂಜಾರಿ, ಚಂದ್ರಪ್ರಭ, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಇನ್ನು, ಈ ಸಿನಿಮಾವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ನಿರ್ಮಾಣಕ್ಕೆ ಬಂಬಲ ನೀಡಿದ್ದಾರೆ. ಈ ಚಿತ್ರಕ್ಕೆ ನಾಯಕ ನಟರಾಜ್ ಕಥೆ ಬರೆದರೆ, ಗಿಲ್ಲಿ ವೆಂಕಟೇಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಸಂಗೀತ, ಜೀವನ್ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿದೆ.


