ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಎಸ್. ಮಹೇಂದರ್ ಮತ್ತು ಹಂಸಲೇಖ ಅವರಿಗೂ ಸ್ಥಾನವಿದೆ. ಎಸ್. ಮಹೇಂದರ್ ನಿರ್ದೇಶನದ ‘ಶೃಂಗಾರ ಕಾವ್ಯ’, ‘ಕರ್ಪೂರದ ಗೊಂಬೆ’, ‘ಕೌರವ’, ‘ಸ್ನೇಹಲೋಕ’, ‘ಗಟ್ಟಿಮೇಳ’ ಮುಂತಾದ ಹಲವು ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜಿಸಿದ್ದರು. ಈ ಜೋಡಿಯ ಕೊನೆಯ ಚಿತ್ರ, ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಪಂಪ’ ಆಗಿತ್ತು.
ಇದೀಗ ಎಸ್. ಮಹೇಂದರ್ ನಿರ್ದೇಶನದ ಹೊಸ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ. ವಿಜಯ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಶ್ರೀ ಗುರುರಾಯರು ಸಿನಿಮಾ ಬ್ಯಾನರ್ ಅಡಿಯಲ್ಲಿ ಚಿತ್ರ ಸೆಟ್ಟೇರಲಿದ್ದು, ಜನವರಿ 16ರಂದು ಚಿತ್ರದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಪರಿಚಯವಾಗಲಿದೆ.
ಇನ್ನು, ಹಂಸಲೇಖ ಅವರ ಹೆಣ್ಣು ಭ್ರೂಣ ಹತ್ಯೆ ಕುರಿತು ‘ಓಕೆ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ವರ್ಷ ಅವರ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರದ ಘೋಷಣೆಯಾಗಿತ್ತು.
‘ಜನ ನಾಯಗನ್’ ಬಿಡುಗಡೆಗೆ ಗ್ರೀನ್ ಸಿಗ್ನಲ್; ಮುಂದಿನ ಶುಕ್ರವಾರ ಬಿಡುಗಡೆ ಸಾಧ್ಯತೆ


