ಮತ್ತೆ ‘ಬಿಗ್‍ ಬಾಸ್‍’ ನಡೆಸಿಕೊಡ್ತಾರಂತೆ ಸುದೀಪ್‍! ಇಂದು ಅಧಿಕೃತ ಘೋಷಣೆ?

ಕಿರುತೆರೆ, ಚಂದನವನ, ಸಿನಿ ಸುದ್ದಿ

‘ಬಿಗ್‍ ಬಾಸ್‍ – ಸೀಸನ್‍ 11’ ತಮ್ಮ ಕೊನೆಯ ಸೀಸನ್‍ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್‍ ತಿಂಗಳಲ್ಲೇ ಸುದೀಪ್‍ ಘೋಷಿಸಿದ್ದರು. ಈ ಬಾರಿಯ ಗ್ರಾಂಡ್‍ ಫಿನಾಲೆ ತಮ್ಮ ಕೊನೆಯ ಗ್ರಾಂಡ್‍ ಫಿನಾಲೆ ಆಗಲಿದೆ ಎಂದು ಸುದೀಪ್‍ ಹೇಳಿಕೊಂಡಿದ್ದರು.

ಆದರೆ, ಈಗ ‘ಬಿಗ್‍ ಬಾಸ್‍ – ಸೀಸನ್‍ 12’ ಕಾರ್ಯಕ್ರಮವನ್ನೂ ಅವರು ನಡೆಸಿಕೊಡ್ತಾರಾ? ಎಂಬ ಪ್ರಶ್ನೆಯೊಂದು ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ಸುದೀಪ್‍ 12ನೇ ಅವತರಣಿಕೆಯನ್ನು ನಡೆಸಿಕೊಡಲಿದ್ದು, ಕಾರ್ಯಕ್ರಮ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಯಲಿದ್ದು, ಇದರಲ್ಲಿ ಸುದೀಪ್‍ ಭಾಗವಹಿಸುವಿಕೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ಕಳೆದ 10 ಅವತರಣಿಕೆಗಳನ್ನು ನಿರೂಪಕರಾಗಿ ಮುನ್ನಡೆಸಿದ್ದ ಸುದೀಪ್‍, 11ನೇ ಅವತರಣಿಕೆಯನ್ನೇ ನಡೆಸಿಕೊಡುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಕಳೆದ ವರ್ಷವಿತ್ತು. ಸುದೀಪ್‍ ತಾವು ಈ ಬಾರಿ ಬಹುತೇಕ ಕಾರ್ಯಕ್ರಮದಲ್ಲಿರುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಆದರೆ, ಅಂತಿಮವಾಗಿ ಕಲರ್ಸ್‍ ಕನ್ನಡದವರ ಒತ್ತಾಯದ ಮೇರೆಗೆ ಸುದೀಪ್‍ ಕೊನೆಗೂ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಮುಂದಾದರು. ಕಾರ್ಯಕ್ರಮ ಶುರುವಾದ ಮೊದಲ ವಾರ ಟಿಆರ್‍ಪಿ ಹಂಚಿಕೊಳ್ಳುವುದರ ಜೊತೆಗೆ, ಇದು ತಮ್ಮ ಕೊನೆಯ ಕಾರ್ಯಕ್ರಮ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಸುದೀಪ್‍, ‘ಕಳೆದ 10 + 1 ವರ್ಷಗಳಿಂದ ‘ಬಿಗ್‍ ಬಾಸ್‍’ ನಡೆಸಿಕೊಡುತ್ತಿದ್ದು, ಇದು ಮುಂದುವರೆಯುವುದಕ್ಕೆ ಸಕಾಲ. ನಿರೂಪಕನಾಗಿ ಇದು ನನ್ನ ಕೊನೆಯ ವರ್ಷವಾಗಿದ್ದು, ಈ ನನ್ನ ನಿರ್ಧಾರವನ್ನು ಎಲ್ಲರೂ ಗೌರವಿಸುತ್ತಾರೆ ಎಂದು ನಂಬಿದ್ದೇನೆ. ನನ್ನ ಶಕ್ತಿ ಮೀರಿ ಈ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದರು.

ಈ ವರ್ಷ ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಬೇರೊಬ್ಬರು ನಡೆಸಿಕೊಡಬಹುದು ಎನ್ನುವಾಗಲೇ, ಸುದೀಪ್‍ ಅವರ ಹೆಸರೇ ಮತ್ತೊಮ್ಮೆ ಕೇಳಿಬಂದಿದೆ. ಇದಕ್ಕೆ ಕಾರಣವೂ ಇದೆ. ಕಲರ್ಸ್ ಕನ್ನಡದ TRP ಬಹಳ ಕುಸಿದಿದೆ. TRP ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಸ್ಟಾರ್ ಸುವರ್ಣದಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಇತ್ತೀಚೆಗೆ, ಒಂದು ವಾರ ಕಲರ್ಸ್ ಕನ್ನಡ ಮೂರನೇ ಸ್ಥಾನಕ್ಕೆ ಕುಸಿದು, ಸ್ಟಾರ್ ಸುವರ್ಣ ಎರಡನೇ ಸ್ಥಾನಕ್ಕೆ ಏರಿದ್ದೂ ಇದೆ. TRP ಹೆಚ್ಚಿಸುವ ಸಲುವಾಗಿ ಚಾನಲ್‍ ಮುಂದಾಗಿದ್ದು, ಅದಕ್ಕೆ ಒಂದು ದೊಡ್ಡ ಕಾರ್ಯಕ್ರಮ ಬೇಕಾಗಿದೆ. ಹಾಗಾಗಿ, ‘ಬಿಗ್‍ ಬಾಸ್’‍ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಸುದೀಪ್‍ ಅವರನ್ನು ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.ಸ

ಅದಕ್ಕೆ ಸರಿಯಾಗಿ, ಈ ಬಾರಿ ಕಾರ್ಯಕ್ರಮ ಅವಧಿಗಿಂತ ಮೊದಲು ಶುರುವಾಗುವ ಮುನ್ಸೂಚನೆ ಇದೆ. ಸಾಮಾನ್ಯವಾಗಿ, ‘ಬಿಗ್‍ ಬಾಸ್‍’ ಕಾರ್ಯಕ್ರಮ ಪ್ರತೀ ವರ್ಷ ಅಕ್ಟೋಬರ್‍ನಲ್ಲಿ ಪ್ರಾರಂಬವಾಗುತ್ತಿತ್ತು. ಆದರೆ, ಈ ಬಾರಿ ಮೂರು ತಿಂಗಳ ಮೊದಲೇ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

‘ಮ್ಯಾಕ್ಸ್ 2’ ಚಿತ್ರದಲ್ಲಿ ಸುದೀಪ್‍ಗೆ ಜೊತೆಯಾದ ಮಾಳವಿಕಾ ಮೋಹನನ್‍

Discover more from KannadaScreens

Subscribe now to keep reading and get access to the full archive.

Continue reading