ಬೇರೆಯವರು ‘ಬಿಗ್‍ ಬಾಸ್‍’ ನಡೆಸಿಕೊಡೋದನ್ನು ನೋಡಲು ನಾನು ಕಾಯ್ತಿದ್ದೀನಿ: ಸುದೀಪ್‍

ಕಿರುತೆರೆ, ಚಂದನವನ, ವೀಡಿಯೋ, ಸಂದರ್ಶನ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್‍ ಬಾಸ್‍’ನಿಂದ ನಿರೂಪಕ ಸುದೀಪ್‍ ಅವರು ಹೊರನಡೆಯುವ ಸಾಧ್ಯತೆ ಇದೆ, ಅವರ ಬದಲು ಬೇರೆಯವರು ಕಾರ್ಯಕ್ರಮವನ್ನು ನಡೆಸಿಕೊಡುವ ಸಾಧ್ಯತೆ ಇದೆ ಎಂಬ ಮಾತು ಇತ್ತೀಚೆಗೆ ಕೇಳಿ ಬಂದಿತ್ತು. ಈ ವಿಷಯವಾಗಿ ಸುದೀಪ್‍ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಶನಿವಾರ ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್‍ ಇದೇ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಹಾಗಂತ ಅವರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿಲ್ಲ ಎಂದು ಹೇಳಿಲ್ಲ. ಹಾಗೆಯೇ ನಡೆಸಿಕೊಡುತ್ತೀನಿ ಎಂದು ಸಹ ಹೇಳಿಲ್ಲ.

ಈ ಕುರಿತು ಮಾತನಾಡಿರುವ ಅವರು, ‘‘ಬಿಗ್‍ ಬಾಸ್‍’ ಮಾತುಕತೆ ನಡೆಯುತ್ತಿದೆ. ನನ್ನ ಜೀವನದ ಹಲವು ದಿನಗಳನ್ನು ನನಾನು ಬಿಗ್ ಬಾಸ್‍ಗೆ ದಾನ ಮಾಡಿದ್ದೇನೆ. ಆ ಕಾರ್ಯಕ್ರಮಕ್ಕೆ ಸಾಕಷ್ಟು ಶ್ರಮ ಹಾಕಿದ್ದೇನೆ. ಎಲ್ಲರಿಗೂ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ ಎಂದಷ್ಟೇ ಗೊತ್ತಿದೆ. ಆದರೆ, ಹೇಗೆ ನಡೆಸಿಕೊಡುತ್ತೇನೆ ಎಂದು ಯಾರಿಗೂ ಗೊತ್ತಿಲ್ಲ. ಹೇಗೆ ನಿಂತಿರುತ್ತೇನೆ ಯಾರಿಗಾದರೂ ಗೊತ್ತಾ? ಇದೇ ‘ಮ್ಯಾಕ್ಸ್’ ಚಿತ್ರೀಕರಣ ಮಾಡುವಾಗ ಬೆಳಿಗ್ಗೆ ಮೂರೂವರೆಗೆ ಚಿತ್ರೀಕರಣ ಮುಗಿಸಿ, ಇಲ್ಲಿಗೆ ಬರುತ್ತಿದ್ದೆ. ನನ್ನಿಂದ ತಡವಾಗಬಾರದು ಎಂದು ಚಾರ್ಟರ್ಡ್ ಫ್ಲೈಟ್‍ ಬಾಡಿಗೆ ತಗೆದುಕೊಂಡಿದ್ದೆ. ಮಹಾಬಲಿಪುರಂನಿಂದ ಚೈನ್ನೈಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬರುತ್ತಿದೆ. ಚಿತ್ರೀಕರಣ ಮುಗಿಸಿ ರಾತ್ರೋರಾತ್ರಿ ಚೆನ್ನೈಗೆ ಹೋಗಿ ಮಹಾಬಲಿಪುರಂಗೆ ಹೋಗುತ್ತಿದ್ದೆ. ಆ ಕಾರ್ಯಕ್ರಮಕ್ಕೆ ನಾನು ಸಾಕಷ್ಟು ಸಮಯ ಕೊಡುತ್ತಿದ್ದೆ. ನಾನು ಸಿನಿಮಾ ಬಗ್ಗೆ ಗಮನ ಹರಿಸಲಾ, ಕಾರ್ಯಕ್ರಮದ ಬಗ್ಗ ಗಮನ ಹರಿಸಲಾ ಅಥವಾ ನನ್ನ ಬಗ್ಗೆ ಗಮನ ಹರಿಸಲಾ?’ ಎಂದು ಅವರು ಪ್ರಶ್ನಿಸಿದರು.

ನಾವು ಜೀವನದಲ್ಲಿ ಮುನ್ನಡೆಯುತ್ತಿರಬೇಕು ಎಂದ ಸುದೀಪ್‍, ‘ಇಷ್ಟು ವರ್ಷ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದೇನೆ, ಕಾರ್ಯಕ್ರಮಕ್ಕಾಗಿ ಸಾಕಷ್ಟು ಟೈಂ ಕೊಟ್ಟಿದ್ದೇನೆ. ಕೆಲವೊಮ್ಮೆ ನಾವು ಜೀವನದಲ್ಲಿ ಮುಂದುವರೆಯಬೇಕು. ನನಗೆ ಮಾಡುವುದಕ್ಕೆ ಆಸಕ್ತಿ ಇಲ್ಲ, ಅವರಿಗೆ ನಾನು ಬೇಡ ಎಂಬುದು ಇದ್ಯಾವುದೂ ಕಾರಣವಲ್ಲ. ಅವರು ಯಾರನ್ನಾದರೂ ಹುಡುಕಿಕೊಂಡರೆ ಒಳ್ಳೆಯದು. ಬೇರೆಯವರು ‘ಬಿಗ್ ಬಾಸ್‍’ ನಡೆಸಿಕೊಡುವುದನ್ನು ನೋಡೋಕೆ ನಾನು ಸಹ ಕಾಯುತ್ತಿದ್ದೇನೆ’ ಎಂದು ಹೇಳಿದರು.

ದರ್ಶನ್‍ ಅವರನ್ನು ತಿದ್ದುವಷ್ಟು ದೊಡ್ಡ ಸಂತ ನಾನಲ್ಲ: ಸುದೀಪ್‍

Discover more from KannadaScreens

Subscribe now to keep reading and get access to the full archive.

Continue reading