ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ ‘ದುರಂಧರ್ 2’ ಎಂದ ರಜನಿಕಾಂತ್‍

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಣವೀರ್ ಸಿಂಗ್‍ ಅಭಿನಯದ ‘ದುರಂಧರ್ 2’ ಚಿತ್ರವು ಕಳೆದ ಗುರುವಾರ (ಮಾರ್ಚ್ 19) ಜಗತ್ತಿನಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅದೊಂದು Propaganda ಚಿತ್ರ ಎಂದು ಕನ್ನಡದ ನಟಿ ರಮ್ಯಾ ಹೇಳಿದರೆ, ರಿಷಭ್‍ ಶೆಟ್ಟಿ, ಅಲ್ಲು ಅರ್ಜುನ್‍, ಪ್ರೀತಿ ಜಿಂಟಾ ಸೇರಿದಂತೆ ಸಾಕಷ್ಟು ಮಂದಿ ಚಿತ್ರವನ್ನು ಹೊಗಳಿದ್ದಾರೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್‍ ಸಹ ಚಿತ್ರವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಚಿತ್ರ ನೋಡಿರುವ ರಜನಿಕಾಂತ್‍, ಚಿತ್ರವನ್ನು ಮೆಚ್ಚಿ ಆ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ ಎಂದು ಬಣ್ಣಿಸಿದ್ದಾರೆ.

‘ಎಂಥಾ ಚಿತ್ರ ‘ದುರಂಧರ್ 2’. ಆದಿತ್ಯ ಧರ್‍ ಬಾಕ್ಸ್ ಆಫೀಸ್‍ನ ಬಾಪ್‍. ರಣವೀರ್ ಮತ್ತು ಇಡೀ ಚಿತ್ರತಂಡಕ್ಕೆ ಶುಭಾಶಯಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್‍’ ಎಂದು ಅವರು ಬರೆದಿದ್ದಾರೆ. ರಜನಿಕಾಂತ್‍ರಂತಹ ಸ್ಟಾರ್ ನಟರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿ ಚಿತ್ರತಂಡ ಖುಷಿಯಾಗಿದೆ.

 

ಇನ್ನು, ‘ದುರಂಧರ್ 2’ ಚಿತ್ರದ ಗಳಿಕೆ ಜೋರಾಗಿದೆ. ಚಿತ್ರವು ಕೇವಲ ಐದು ದಿನಗಳಲ್ಲೇ ಭಾರತದಲ್ಲಿ 500 ಕೋಟಿ ಗಳಿಕೆ ಮಾಡಿದೆ. ಜಗತ್ತಿನಾದ್ಯಂತ ಅದರ ಮೊತ್ತ ಇನ್ನೂ ದೊಡ್ಡದಿದೆ. ಚಿತ್ರವು ಗುರುವಾರ ಬಿಡುಗಡೆಯಾಗಿದ್ದು, ಸೋಮವಾರ ಮುಗಿಯುವ ಹೊತ್ತಿದೆ 519.26 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ 500 ಕೋಟಿ ರೂ. ಕ್ಲಬ್‍ ಸೇರಿದ ಬಾಲಿವುಡ್‍ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್‍ ಟ್ರಾಕರ್ ಸಚ್ನಿಕ್‍ ಡಾಟ್‍ ಕಾಮ್‍ ಪ್ರಕಾರ, ಜಾಗತಿಕವಾಗಿ ಈ ಚಿತ್ರವು ಐದು ದಿನಗಳಲ್ಲಿ 829.76 ಕೋಟಿ ಮಾಡಿದೆಯಂತೆ.

‘ದುರಂಧರ್ 2 – ದಿ ರಿವೆಂಜ್‍’ ಚಿತ್ರವು ‘ದುರಂಧರ್’ನ ಮುಂದುವರೆದ ಭಾಗವಾಗಿದ್ದು, ಮೊದಲ ಚಿತ್ರವು ಕಳೆದ ವರ್ಷದ ಡಿಸೆಂಬರ್ 05ರಂದು ಬಿಡುಗಡೆಯಾಗಿ, ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಸಾವಿರ ಕೋಟಿ ಕ್ಲಬ್‍ ಸೇರಿತ್ತು. ಆದಿತ್ಯ ಧರ್‍ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್‍ ಸಿಂಗ್‍, ಅಕ್ಷಯ್‍ ಖನ್ನಾ, ಸಂಜಯ್ ದತ್‍, ರಾಕೇಶ್‍ ಬೇಡಿ, ಅರ್ಜುನ್‍ ರಾಮ್‍ಪಾಲ್‍ ಮುಂತಾದವರು ಅಭಿನಯಿಸಿದ್ದಾರೆ.

ಐದು ದಿನಗಳಲ್ಲಿ 500 ಕೋಟಿ ಕ್ಲಬ್‍ ಸೇರಿದ ‘ದುರಂಧರ್ 2’

Latest Posts

Discover more from KannadaScreens

Subscribe now to keep reading and get access to the full archive.

Continue reading