ಹಳ್ಳಿ ಸೊಗಡಿನ ‘ವಲವಾರ’ ಜನವರಿ 30ರಂದು ತೆರೆಗೆ

ಚಂದನವನ, ಸಿನಿ ಸುದ್ದಿ

ಕನ್ನಡದಲ್ಲೀಗ ನೆಲ ಮೂಲದ‌ ಕಥೆಗಳು ಪ್ರೇಕ್ಷಕರ ಗಮನ‌ ಸೆಳೆಯುತ್ತಿವೆ. ಅದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ‘ವಲವಾರ’. ಶೀರ್ಷಿಕೆ ಹಾಗೂ ತನ್ನ ಮೊದಲ ನೋಟದಿಂದಲೇ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿರುವ ‘ವಲವಾರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಟ ಶಿವರಾಜಕುಮಾರ್‍ ಟ್ರೇಲರ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ‘ವಲವಾರ’ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಗೌರ ಎನ್ನುವ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ.

ಮಾರ್ಫ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿರುವ ‘ವಲವಾರ’ ಚಿತ್ರಕ್ಕೆ ಸುತನ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಪ್ರಮೋದ್‌ ಮರವಂತೆ ಸಾಹಿತ್ಯ ಬಾಲರಾಜ್‌ ಗೌಡ ಛಾಯಾಗ್ರಹಣವಿದ್ದು, ಚಿತ್ರದಲ್ಲಿ ವೇದಿಕ್‍ ಕೌಶಲ್,‍ ಶಯನ್‍, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಹೊರಬಂತು ಸೈಕಾಲಜಿಕಲ್‌ ಥ್ರಿಲ್ಲರ್‌ ‘ವಿಕಲ್ಪ’ ಚಿತ್ರದ ಟ್ರೇಲರ್‌

Latest Posts

Discover more from KannadaScreens

Subscribe now to keep reading and get access to the full archive.

Continue reading