ಜೀ ಕನ್ನಡಕ್ಕೆ ‘ಮಾರ್ಟಿನ್‍’ ಆಗಮನ; ಡಿ. 29ರಂದು ಸಂಜೆ 4ಕ್ಕೆ ಪ್ರಸಾರ …

ಕಿರುತೆರೆ, ಚಂದನವನ, ಸಿನಿ ಸುದ್ದಿ

ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’ ಚಿತ್ರವು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿದೆ. 100 ಕೋಟಿ ರೂ. ಬಜೆಟ್‍ನ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಹಾಗೆಯೇ, ಬಾಕ್ಸ್ ಆಫೀಸ್‍ನಲ್ಲೂ ಚಿತ್ರ ದೊಡ್ಡ ಸದ್ದು ಮಾಡಲಿಲಲ್ಲ. ಈಗ ಚಿತ್ರವು ಟಿವಿಯಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ.

‘ಮಾರ್ಟಿನ್’ ಚಿತ್ರವು ಇದೇ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಚಿತ್ರವು ಅಮೇಜಾನ್‍ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ಮೊದಲ ಬಾರಿಗೆ ಚಿತ್ರವು ಟಿ.ವಿಯಲ್‍ಲಿ ಗ್ಲೋಬಲ್‍ ಪ್ರೀಮಿಯರ್‍ ಕಾಣುತ್ತಿದೆ.

‘ಮಾರ್ಟಿನ್’ ಚಿತ್ರದಲ್ಲಿ ನಾಯಕ ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತಾನು ಯಾರು ಎಂದು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ. ಆ ನಂತರ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ.

ಈ ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಆ್ಯಕ್ಷನ್‍ ಚಿತ್ರವಾಗಿದ್ದು, ದೇಶಪ್ರೇಮದ ಸಾಕಷ್ಟು ಅಂಶಗಳು ಇವೆ. ಚಿತ್ರದಲ್ಲಿ ನಾಯಕಿಯಾಗಿ ವೈಭವಿ ಶಾಂಡಿಲ್‍ಯ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಸುಕೃತ ವಾಗ್ಲೆ, ಮಾಳವಿಕಾ ಅವಿನಾಶ್‍, ನಿಕಿತಿನ್ ಧೀರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಐದು ಭಾಷೆಗಳಲ್ಲಿ ‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ …’ ಹಾಡು ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading