‘ರಾಜ ರಾಣಿ’ ಗ್ರಾಂಡ್‍ ಫಿನಾಲೆಯಲ್ಲಿ ‘ಬಿಗ್‍ ಬಾಸ್‍’ ಸ್ಪರ್ಧಿಗಳ ಘೋಷಣೆ …

ಕಿರುತೆರೆ, ಚಂದನವನ, ಸಿನಿ ಸುದ್ದಿ

‘ಬಿಗ್‍ ಬಾಸ್‍’ ಕಾರ್ಯಕ್ರಮದ 11ನೇ ಅವತರಣಿಕೆಯು ಇದೇ ಸೆಪ್ಟೆಂಬರ್ 29ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದೆ. ಈ ಬಾರಿಯ ವಿಶೇಷತೆಯೆಂದರೆ, ಒಂದು ದಿನ ಮುಂಚೆಯೇ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಐವರು ಸ್ಪರ್ಧಿಗಳ ಹೆಸರುಗಳು ಹೊರಬೀಳಲಿವೆ.

ಹೌದು, ಇದೇ ಶನಿವಾರ (ಸೆಪ್ಟೆಂಬರ್ 28) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ರಾಜ ರಾಣಿ’ ಕಾರ್ಯಕ್ರಮದ ಗ್ರಾಂಡ್‍ ಫಿನಾಲೆ ಇದೆ. ಈ ಸಂದರ್ಭದಲ್ಲಿ ‘ಬಿಗ್‍ ಬಾಸ್‍’ ಮನೆಗೆ ಹೋಗುತ್ತಿರುವ ಐವರು ಸ್ಫರ್ಧಿಗಳನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಾಗಿ, ಕಾರ್ಯಕ್ರಮದ ದಿನ ಸ್ಪರ್ಧಿಗಳ ಹೆಸರುಗಳನ್ನು ಘೋಷಿಸಲಾಗುತ್ತಿತ್ತು. ಪ್ರತಿಯೊಬ್ಬ ಸ್ಪರ್ಧಿಯನ್ನು ಸುದೀಪ್ ‍ವೇದಿಕೆಗೆ ಕರೆದು ಪರಿಚಯಿಸಿ, ಆ ನಂತರ ಮನೆಗೆ ಕಳುಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಒಂದು ದಿನ ಮೊದಲೇ ಐವರು ಸ್ಪರ್ಧಿಗಳ ಹೆಸರುಗಳನ್ನು ಮೊದಲೇ ಘೋಷಿಸಲಾಗುತ್ತದೆ. ಮಿಕ್ಕ ಸ್ಪರ್ಧಿಗಳ ಹೆಸರುಗಳನ್ನು ಸೆ. 29ರಂದು ಕಾರ್ಯಕ್ರಮದಲ್ಲಿ ನೇರವಾಗಿ ಪರಿಚಯಿಸಲಾಗುತ್ತದೆ.

ಈ ಕುರಿತು ಮಾತನಾಡುವ ಕಲರ್ಸ್ ಕನ್ನಡದ ಬ್ಯುಸಿನೆಸ್‍ ಹೆಡ್‍ ಪ್ರಶಾಂತ್ ನಾಯಕ್‍, ‘ಈ ಬಾರಿ ಕಾರ್ಯಕ್ರಮಕ್ಕೂ ಮೊದಲೇ ಕೆಲವು ಸ್ಪರ್ಧಿಗಳ ಹೆಸರುಗಳನ್ನು ‘ರಾಜ ರಾಣಿ’ ಗ್ರಾಂಡ್‍ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ. ಇದು ಈ ವರ್ಷ ಹೊಸತು. ಇದಲ್ಲದೆ ಸ್ಪರ್ಧಿಗಳಲ್ಲಿ ವಿಭಿನ್ನ ಮನಸ್ಥಿತಿಯವರನ್ನು ನೋಡಬಹುದು’ ಎಂದರು.

‘ಬಿಗ್‍ ಬಾಸ್‍’ ಕಾರ್ಯಕ್ರಮದ 11ನೇ ಅವತರಣಿಕೆಯು ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆಯೊಂದಿಗೆ ಪ್ರಸಾರವಾಗಲಿದೆ.

ಸಿನಿಮಾ ಯಾವಾಗ ಎಂದರೆ ಮುಖಕ್ಕೆ ಹೊಡೆದ ಹಾಗಾಗುತ್ತಿತ್ತು: ಸುದೀಪ್‍

Discover more from KannadaScreens

Subscribe now to keep reading and get access to the full archive.

Continue reading