ಟೀಕೆ-ಟಿಪ್ಪಣಿಗಳೆ ಮಧ್ಯೆ ‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಬಿಡುಗಡೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರದ ಮೊದಲ ಗೀತೆಯಾದ ‘ಮ್ಯಾಕ್ಸಿಮಮ್ ಮಾಸ್‍’, ಸುದೀಪ್‍ ಹುಟ್ಟುಹಬ್ಬದ ಅಂಗವಾಗಿ ಈ ಹಾಡು ಬಿಡುಗಡೆಯಾಗಿದೆ.

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ‌ ಹಾಡಿಗೆ, ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ. ಬಿಜ್ಜು ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಇದೊಂದು ಮಾಸ್ ಗೀತೆಯಾಗಿದ್ದು ಅಭಿಮಾನಿಗಳ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಂದು ಕಡೆ ಅಭಿಮಾನಿಗಳು ಖುಷಿಪಟ್ಟರೆ, ಇನ್ನೊಂದು ಕಡೆ ಸೋಷಿಯಲ್‍ ಮೀಡಿಯಾದಲ್ಲಿ ಹಾಡಿಗೆ ಸಾಕಷ್ಟು ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಪ್ರಮುಖವಾಗಿ ಅನುಫ್‍ ಭಂಡಾರಿ ಬರೆದಿರುವ ಕೆಲವು ಸಾಲುಗಳ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಅಪ್ಪಂಗೆ ಹುಟ್ಟಿದ್ರೆ ತೊಡ್ಡೆ ತಟ್ಟಿ ಬಾರೋ …’, ‘ಸುಕ್ಕ ಸುಕ್ಕ ಸುಕ್ಕ ಸುಕ್ಕ ಸಿಕ್ಕಾಪಟ್ಟೆ ಬ್ಯಾಡ್‍ ಆಸ್‍ ಮುಖ ಮೂತಿ ಸೀಳೋಗತ್ತೆ ಇಕ್ತಾನ್‍ ಬಂದು ಮ್ಯಾಡ್‍ ಮ್ಯಾಕ್ಸ್ …’ ಮುಂತಾದ ಸಾಲುಗಳು, ಸುದೀಪ್‍ರಂತಹ ಸ್ಟಾರ್‍ ನಟರ ಅಭಿರುಚಿ ಮತ್ತು ಅವರ ಲೆವೆಲ್‍ಗೆ ತಕ್ಕ ಹಾಗಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದೆ. ಅದರಲ್ಲೂ ‘ಅಪ್ಪಂಗೆ ಹುಟ್ಟಿದ್ರೆ ತೊಡ್ಡೆ ತಟ್ಟಿ ಬಾರೋ …’ ಎಂದರೇನು? ಎಂಬ ಪ್ರಶ್ನೆ ಕೇಳಿಬರುತ್ತಿದೆ.

‘ಮ್ಯಾಕ್ಸ್’ ಒಂದು ಮಾಸ್ ಚಿತ್ರವಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್‍ ಚಂದ್ರ ಛಾಯಾಗ್ರಹಣವಿದೆ.

‘ಮ್ಯಾಕ್ಸ್’ ಚಿತ್ರವನ್ನು ವಿ ಕ್ರಿಯೇಷನ್ಸ್ ಬ್ಯಾನರ್‍ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಾಣ ಮಾಡುತ್ತಿದ್ದಾರೆ.

‘ಹನುಮಾನ್‍’ ನಿರ್ಮಾಪಕರಿಂದ ‘ಬಿಲ್ಲ ರಂಗ ಭಾಷಾ’ ನಿರ್ಮಾಣ

Discover more from KannadaScreens

Subscribe now to keep reading and get access to the full archive.

Continue reading