ಕಾಲೆಳೆದವರೇ ಈಗ ಕಾಲ್‍ಶೀಟ್‍ ಕೇಳುತ್ತಿದ್ದಾರಂತೆ …

ಚಂದನವನ, ಸಿನಿ ಸುದ್ದಿ

ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ‘ಉಪಾಧ್ಯಕ್ಷ’ ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆಯಂತೆ. ಇದನ್ನು ನೋಡಿ ಇಡೀ ಚಿತ್ರತಂಡದವರು ಖುಷಿಯಾಗಿದ್ದಾರೆ. ಆ ಖುಷಿಯಲ್ಲೇ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಅಂದು ಚಿಕ್ಕಣ್ಣ ಧನ್ಯವಾದ ಸಲ್ಲಿಸಬೇಕಾದ ದೊಡ್ಡ ಪಟ್ಟಿಯನ್ನೇ ಬರೆದುಕೊಂಡು ಬಂದರು. ವೇದಿಕೆಯ ಮೇಲೆ ನಿಂತು ಅವರಿಗೆಲ್ಲಾ ಧನ್ಯವಾದಗಳನ್ನು ಸಮರ್ಪಿಸಿದರು. ‘ಅಂದು ಕಾಲೆಳೆದವರೇ ಕಾಲ್‍ಶೀಟ್‍ ಕೇಳುತ್ತಿದ್ದಾರೆ. ಕರ್ನಾಟಕದ ಜನ ನಮ್ಮ ಚಿತ್ರವನ್ನು ಗೆಲ್ಲಿಸಿದ್ದಾರೆ. ಅವರಿಗೆ ಇಲ್ಲಿಂದಲೇ ಶರಣು. ಇನ್ನು ನನ್ನ ನಂಬಿ ದುಡ್ಡು ಹಾಕಿರುವ ನಿರ್ಮಾಪಕರಿಗೆ, ಒಳ್ಳೆಯ ಚಿತ್ರಕೊಟ್ಟ ನಿರ್ದೇಶಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ. ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ನನಗೆ ಶಿವರಾಜಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಸೂರ್ಯ ಸೇರಿದಂತೆ ಸಾಕಷ್ಟು ನಾಯಕರು ಪ್ರೋತ್ಸಾಹ ನೀಡಿದ್ದಾರೆ. ಅವರಿಗೆಲ್ಲಾ ವಿಶೇಷ ಧನ್ಯವಾದ’ ಎಂದರು.

ನಿರ್ದೇಶಕ ಅನಿಲ್ ಮಾತನಾಡಿ, ‘ಈ ಚಿತ್ರ ಆರಂಭವಾಗಿದ್ದು ಚಿಕ್ಕಣ್ಣ ಅವರ ಮನೆಯಿಂದ. ಅಲ್ಲೇ ನಿರ್ಮಾಪಕ ಉಮಾಪತಿ ಅವರು ಕಥೆ ಕೇಳಿದ್ದು. ಸ್ಕ್ರಿಪ್ಟ್ ಹಂತದಲ್ಲಿ ಸಾಕಷ್ಟು ಜನ ನನಗೆ ಸಹಕಾರ ನೀಡಿದ್ದಾರೆ. ಜನರಿಗೆ ನಮ್ಮ ಸಿನಿಮಾ ಇಷ್ಟವಾಗಿದೆ. ಕುಟುಂಬ ಸಮೇತ ಬಂದು ನೋಡುತ್ತಿದ್ದಾರೆ. ಬಹಳ ಸಂತೋಷವಾಗಿದೆ’ ಎಂದರು.

ಚಿಕ್ಕಣ್ಣನವು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಹಳ ಒತ್ತಡದಲ್ಲಿದ್ದರು ಎಂದ ನಿರ್ಮಾಪಕ ಉಮಾಪತಿ, ‘ಡಿ.ಎನ್ ಪಿಕ್ಚರ್ಸ್ ಮೂಲಕ ನನ್ನ ಪತ್ನಿ ಸ್ಮಿತಾ ಉಮಾಪತಿ ಈ ಹಿಂದೆ ‘ಒಂದಲ್ಲಾ ಎರಡಲ್ಲಾ’ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಿಸಿದ್ದರು. ಈಗ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡದಕ್ಕಿಂತ ಹೆಚ್ಚಿನ ಯಶಸ್ಸು ಸಿಕ್ಕಿದೆ. ಈ ಯಶಸ್ಸು ನನ್ನ ತಂಡದ್ದು. ಮುಖ್ಯವಾಗಿ ಚಿಕ್ಕಣ್ಣ ಅವರದು. ಬಿಡಗಡೆಗೂ ಮುನ್ನ ಅವರು ತುಂಬಾ ಒತ್ತಡದಲ್ಲಿದ್ದರು. ಈ ಗೆಲವು ಅವರಿಗೆ ಬೇಕಿತ್ತು. ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಉಮಾಪತಿ ಶ್ರೀನಿವಾಸಗೌಡ ತಿಳಿಸಿದರು.

ನಾಯಕಿ ಮಲೈಕ, ಧರ್ಮಣ್ಣ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಆರ್. ಚಂದ್ರು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಘ

Latest Posts

Discover more from KannadaScreens

Subscribe now to keep reading and get access to the full archive.

Continue reading