ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ

ಚಂದನವನ, ಸಿನಿ ಸುದ್ದಿ

‘ದುನಿಯಾ’ ವಿಜಯ್‍ ಇತ್ತೀಚೆಗೆ 50 ವರ್ಷಗಳನ್ನು ಮುಗಿಸಿ, 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ.

‘ಭೀಮ’ ಏನೋ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ನಂತರ ವಿಜಯ್‍ ಅಭಿನಯದ ಮುಂದಿನ ಚಿತ್ರ ಯಾವುದಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ‘ಜಂಟಲ್‍ ಮ್ಯಾನ್‍’ ಮತ್ತು ‘ಗುರುಶಿಷ್ಯರು’ ಚಿತ್ರಗಳನ್ನು ನಿರ್ದೇಶಿಸಿದ್ದ ಜಡೇಶ್‍ ಹಂಪಿ, ವಿಜಯ್‍ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೂ ಇತ್ತು. ಅದೀಗ ನಿಜವಾಗಿದೆ.

ವಿಜಯ್‍ ಹುಟ್ಟುಹಬ್ಬಕ್ಕೆ, ಈ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಆದರೆ, ಸದ್ಯಕ್ಕೆ ಚಿತ್ರಕ್ಕೆ ಹೆಸರಿಟ್ಟಿಲ್ಲ. ವಿಜಯ್‍ ಅಭಿನಯದ 29ನೇ ಚಿತ್ರ ಇದಾದ್ದರಿಂದ, ಸದ್ಯಕ್ಕೆ ‘ವಿಕೆ 29’ ಎಂಬ ಹೆಸರನ್ನು ಇಡಲಾಗಿದೆ. ಅದರ ಜೊತೆಗೆ, ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಟ್ಯಾಗ್‍ಲೈನ್‍ ಸಹ ಈ ಚಿತ್ರಕ್ಕಿದೆ. ‘ಭೀಮ’ ನಿರ್ಮಾಪಕರಲ್ಲೊಬ್ಬರಾದ ಜಗದೀಶ್‍ ಗೌಡ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ‘ದುನಿಯಾ’ ವಿಜಯ್ ಯವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ. ಈ ಚಿತ್ರದ ಕುರಿತ ಇನ್ನಷ್ಟು ವಿಶೇಷ ವಿಚಾರಗಳನ್ನ ‘ಭೀಮ’ ಬಿಡುಗಡೆ ಆದ ಮೇಲೆ ಚಿತ್ರತಂಡ ಬಿಟ್ಟುಕೊಡಲಿದೆ.

ಇನ್ನು, ವಿಜಯ್‍ ತಮ್ಮ 50ನೇ ಹುಟ್ಟುಹಬ್ಬವನ್ನು ತಮ್ಮ ಹುಟ್ಟೂರಾದ ಆನೇಕಲ್ ಬಳಿಯ ಕುಂಬಾರನಹಳ್ಳಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.

‘ಗುನು ಗುನುಗು’ ಎಂದು ಹೆಜ್ಜೆ ಹಾಕಿದ ವಿನಯ್-ಮಲ್ಲಿಕಾ

Latest Posts

Discover more from KannadaScreens

Subscribe now to keep reading and get access to the full archive.

Continue reading