ಮಂಗಳಮುಖಿಯರ ಬದುಕು, ಹೋರಾಟ ಸಾರುವ ‘ಭಾವಾಂತರ’

ಬಾಲನಟನಾಗಿ ಗುರುತಿಸಿಕೊಂಡಿದ್ದ, ಆ ನಂತರ ಗಾಯಕ-ಸಂಗೀತ ನಿರ್ದೇಶಕರಾದ ಕಾರ್ತಿಕ್‍ ಶರ್ಮ, ಈಗ ಸದ್ದಿಲ್ಲದೆ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ ನಟನೆ, ನಿರ್ದೇಶನವನ್ನೂ ಮಾಡಿದ್ದಾರೆ. ಅದೇ ‘ಭಾವಾಂತರ’. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್) ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ತನ್ವಿ ರಾವ್, ರಾಧೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಟ್ರೇಲರ್‍ ಇತ್ತೀಚೆಗೆ ಹೊಂಬಾಳೆ ಮ್ಯೂಸಿಕ್‍ … Continue reading ಮಂಗಳಮುಖಿಯರ ಬದುಕು, ಹೋರಾಟ ಸಾರುವ ‘ಭಾವಾಂತರ’