ಲೈಟ್‍ ಬಾಯ್‍ ಕೈಯಲ್ಲಿ ‘ಟಾಕ್ಸಿಕ್‍’ ಚಿತ್ರಕ್ಕೆ ಕ್ಲಾಪ್ ಮಾಡಿಸಿದ ಯಶ್‍

ಯಶ್‍ ಅಭಿನಯದ 19ನೇ ಚಿತ್ರ ‘ಟಾಕ್ಸಿಕ್‍’ ಯಾವಾಗ ಪ್ರಾರಂಭ ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಗುರುವಾರ ಬೆಳಿಗ್ಗೆ ಚಿತ್ರದ ಮುಹೂರ್ತವಾಗಿದ್ದು, ಇಂದಿನಿಂದಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ‘ಟಾಕ್ಸಿಕ್‍’ ಚಿತ್ರದ ಅಧಿಕೃತ ಘೋಷಣೆ ಜನವರಿ 08ರಂದು ಆಗಿತ್ತು. ಈ ಮಧ್ಯೆ, ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಶುರುವಾಗಿದೆ ಎಂಬ ಮಾತುಗಳು ಸಹ ಇತ್ತು. ಆದರೆ, ಚಿತ್ರದ ಚಿತ್ರೀಕರಣ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಎಚ್‍.ಎಂ.ಟಿ ಫ್ಯಾಕ್ಟರಿಯಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲೇ ಚಿತ್ರದ ಮುಹೂರ್ತ ನಡೆದಿದೆ. … Continue reading ಲೈಟ್‍ ಬಾಯ್‍ ಕೈಯಲ್ಲಿ ‘ಟಾಕ್ಸಿಕ್‍’ ಚಿತ್ರಕ್ಕೆ ಕ್ಲಾಪ್ ಮಾಡಿಸಿದ ಯಶ್‍